ಸಖರೋವ್, ಆಂದ್ರೆ
	1921-89. ರಷ್ಯನ್ ಭೌತವಿಜ್ಞಾನಿ, ಮಾನವ ಹಕ್ಕುಗಳ ಕಟ್ಟಾ ಪ್ರತಿಪಾದಕ. 1975ರಲ್ಲಿ ನೊಬೆಲ್ ಶಾಂತಿ ಪಾರಿತೋಷಿಕ ದಿಂದ ಗೌರವಿಸಲ್ಪಟ್ಟ. ಪ್ರತಿಭಾವಂತನಾಗಿದ್ದ ಈತ ಮೂವತ್ತೆರಡ ನೆಯ ವಯಸ್ಸಿಗೆ ಸೋವಿಯತ್ ಅಕಾಡೆಮಿ ಆಫ್ ಸೈನ್ಸಸ್‍ನ ಸದಸ್ಯ ನಾದ. 1953ರಲ್ಲಿ ಸೋವಿಯತ್ ರಷ್ಯ ಹೈಡ್ರೊಜನ್ ಬಾಂಬನ್ನು ಸ್ಫೋಟಿಸಿತು. ಈ ನಿಟ್ಟಿನಲ್ಲಿ ನಡೆದ ಸಂಶೋಧನೆಯ ನೇಕಾರ ಸಖರೋವ್. ಸದಾ ಈತ ಮಾನವಹಕ್ಕುಗಳನ್ನೂ ನಾಗರಿಕ ಸ್ವಾತಂತ್ರ್ಯವನ್ನೂ ಪ್ರತಿಪಾದಿಸುತ್ತಲೇ ಇದ್ದ. ಜೀವವಿಜ್ಞಾನಿ ಟಿ.ಡಿ.ಲೈಸೆಂಕೊ (1898-1976) ಮಂಡಿಸಿದ ಅವೈಜ್ಞಾನಿಕ ತತ್ತ್ವಗಳನ್ನು ಈತ ವಿರೋಧಿಸಿದ (1968); ಆಫ್ಘಾನಿಸ್ತಾನವನ್ನು ರಷ್ಯ ಆಕ್ರಮಿಸಿದುದನ್ನು ಖಂಡಿಸಿದ (1979). ಈ ಆಕ್ರಮಣದ ವಿರುದ್ಧ ಮಾಸ್ಕೊ-ಒಲಿಂಪಿಕ್ ಕ್ರೀಡೆ ಗಳನ್ನು ಬಹಿಷ್ಕರಿಸುವಂತೆ ಉಳಿದ ರಾಷ್ಟ್ರಗಳಿಗೆ ಕರೆ ನೀಡಿದ. ಇದನ್ನು ಸಹಿಸದ ರಷ್ಯ ಸರಕಾರ ಇವನಿಗೆ ಸಿಕ್ಕಿದ್ದ ಪ್ರಶಸ್ತಿ, ಪದವಿಗಳನ್ನು ಕಿತ್ತುಕೊಂಡು, ಮಾಸ್ಕೊದಿಂದ 400 ಕಿಮೀ ದೂರದ ಲ್ಲಿರುವ ಗಾರ್ಕಿಯಲ್ಲಿ ಸೆರೆಯಲ್ಲಿ ಟ್ಟಿತು. ಮೈಖೇಲ್ ಗೊರ್ಬಚೇವ್ (1931) ಅಧಿಕಾರಕ್ಕೆ ಬಂದ ಮೇಲೆ ಇವನ ಬಿಡುಗಡೆಯಾಯಿತು (1986). ಇವನಿಗೆ ಸಂದಿದ್ದ ಪ್ರಶಸ್ತಿ ಪದವಿಗಳನ್ನು 1989ರಲ್ಲಿ ಮರಳಿಸಲಾಯಿತು. ಅದೇ ವರ್ಷ ಈತ ನಿಧನನಾದ. ಪೂರ್ಣ ಸರ್ಕಾರಿ ಮರ್ಯಾದೆಗಳೊಂದಿಗೆ ಮಾಸ್ಕೊ ರುದ್ರಭೂಮಿ ಯಲ್ಲಿ ಇವನ ಸಮಾಧಿ ಮಾಡಲಾಯಿತು. ಈತ ತನ್ನ ಬದುಕಿನ ಬಗ್ಗೆ ಬರೆದ ಮೆಮೈರ್ಸ್ ಎಂಬ ಕೃತಿ ಇವನ ನಿಧನಾನಂತರ ಪ್ರಕಟವಾಗಿ, ಇಂಗ್ಲಿಷಿಗೆ ಅನುವಾದವಾಗಿ (1990) ಜನಪ್ರಿಯತೆಗಳಿಸಿದೆ.								
			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ